ಶನಿವಾರ, ಜೂನ್ 9, 2007

ನಮ್ಮ ಆರೋಗ್ಯ ಬಹಳ ಮುಖ್ಯ

ನಾವು ಎಂದೆಂದಿಗೂ ಆರೋಗ್ಯವಾಗಿರಬೇಕಾದರೆ ನಾವು ತಿನ್ನುವ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಈಗ ನಾವುಗಳು ಸಿಕ್ಕಿದ್ದನ್ನೆಲ್ಲಾ ತಿಂದುಕೊಂಡು ನಮ್ಮ ದೇಹವನ್ನು ಹಾಳುಮಾಡಿಕೊಂಡು ನರಳಾಟವನ್ನು ಅನುಭವಿಸಿಕೊಂಡು ನಂತರ ಡಾಕ್ಟರ ಹತ್ತಿರ ಓಡಿಹೋಗುತ್ತೇವೆ. ಈಗಿನ ಖಾಯಿಲೆಗಳು ಬರುತ್ತಿರುವುದು ನಾವು ತಿನ್ನುತ್ತಿರುವ ಆಹಾರದಿಂದಲೇ.
ಇದರಲ್ಲಿ ಪ್ರಮುಖವಾದದ್ದು ಆಸಿಡಿಟಿ, ಆತಂಕ, ಭಯ, ಭಯ ಆಗೋದು, ಗ್ಯಾಸ್ ತೊಂದರೆಗಳು, ಅಜೀರ್ಣ, ಮಲಬದ್ಧತೆ, ಇಲ್ಲವೇ ನೀರು, ನೀರು ಭೇದಿ, ಹೊಟ್ಟೆಯಲ್ಲಿ ಗುಡ, ಗುಡ ಶಬ್ದ, ಯಾವಾಗಲೂ ಹೊಟ್ಟೆ ತುಂಬಿದ ಹಾಗೇ ಇರುವುದು, ಇಲ್ಲವೇ ಪದೇ, ಪದೇ ಏನಾದರೂ ತಿನ್ನಬೇಕೆನ್ನಿಸುವುದು, ಗಂಟಲಲ್ಲಿ ಏನೋ ಸಿಕ್ಕಿಕೊಂಡಂತೆ ಭಾಸವಾಗುವುದು, ಮನಸ್ಸಿಗೆ ಏನೋ ತಳಮಳ, ವಿಪರೀತ ಕೋಪ, ಇತ್ಯಾದಿ. ಇದಕ್ಕೆ ನಾವು ಮಾಡುತ್ತಿರುವುದೇನು? ತಕ್ಷಣ ಡಾಕ್ಟರ್ ಹತ್ರ ಓಡಿಹೋಗೋದು. ಅವರು ಕೊಟ್ಟಿದ್ದನ್ನು ನುಂಗುವುದು. ಅವರು ಕೊಟ್ಟಿದ್ದ ಔಷಧಿಯಿಂದ ತಕ್ಷಣ ವಾಸಿಯೇನೋ ಆಗುತ್ತೆ. ಆದರೆ ಅದರಿಂದ ಬೇರೆ ಖಾಯಿಲೆಗಳೂ ಹುಟ್ಟಿಕೊಳ್ಳುತ್ತೆ. ನಿಮಗೆ ಬಂದಿದ್ದ ತೊಂದರೆ ತಾತ್ಕಾಲಿಕವಾಗಿ ವಾಸಿಯಾಗಿರುತ್ತೆ. ಇನ್ನೊಂದು ದಿನ ಮತ್ತದೇ ತೊಂದರೆ ಕಾಣಿಸಿಕೊಳ್ಳುತ್ತೆ. ಹೀಗೇ ಒಂದಕ್ಕೊಂದು ಖಾಯಿಲೆಗಳು ಬಂದು ಒಂದು ದಿನ ಸಕ್ಕರೆ ಖಾಯಿಲೇನೋ, ಕ್ಯಾನ್ಸರ್ರೋ, ಇತ್ಯಾದಿ ಬರುತ್ತೆ. ಆಗ ವೃಥಾ ಡಾಕ್ಟರ್ ಗಾಗಿ ಹುಡುಕಾಟ. ಸುಮ್ಮನೇ ಹಣ ಖರ್ಚು. ಹೀಗಾಗಿ ಜೀವನವೆಲ್ಲಾ ಮಾನಸಿಕ ಹಿಂಸೆ.
ಇದಕ್ಕೆ ಉತ್ತರವನ್ನು ಮುಂದಿನ ಭಾಗದಲ್ಲಿ ಬರೆಯಲಾಗುತ್ತದೆ.

ಕಾಮೆಂಟ್‌ಗಳಿಲ್ಲ: