ಪ್ರಕೃತಿಯಲ್ಲಿ ಕಾಲಗಳು ಬದಲಾವಣೆ ಆಗುತ್ತಿರುತ್ತವೆ. ಅದರಲ್ಲೂ ಈ ಬೇಸಿಗೆ ಕಾಲ ಅನ್ನುವುದು ಬಹಳ ತಾಪವನ್ನುಂಟು ಮಾಡುವಂತಾದ್ದು.
ಈ ಬೇಸಿಗೆಯಲ್ಲಿ ನಾವುಗಳು ಆಹಾರದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಬೇಸಿಗೆಯಲ್ಲಿ ಸೂರ್ಯನ ತಾಪದಿಂದಾಗಿ ದೇಹ ಬಳಲುತ್ತದೆ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ. ಶಕ್ತಿ ಕುಂದುತ್ತದೆ. ಜೀರ್ಣಶಕ್ತಿ ಕಡಿಮೆಯಾಗುತ್ತದೆ. ಹಾಗಾಗಿ ದೇಹ ತಂಪು ಮಾಡುವ, ಜಲ ಅಂಶ ಹೆಚ್ಚು ಇರುವ ಆಹಾರ, ಜ್ಯೂಸ್ ಗಳನ್ನು ಸೇವಿಸಬೇಕು. ಅವು ಜೀರ್ಣಕ್ರಿಯೆಗೂ ಸಹಕಾರಿಯಾಗುವಂತೆ ಇರಬೇಕು. ಉಷ್ಣದ ಪಾನೀಯಗಳನ್ನು ಸೇವಿಸಕೂಡದು. ಉಪ್ಪು, ಹುಳಿ, ಖಾರರಸಗಳುಳ್ಳ ಸಾಧ್ಯವಾದಷ್ಟೂ ಕಡಿಮೆ ಮಾಡಬೇಕು. ಎಣ್ಣೆಯಲ್ಲಿ ಕರಿದ ತಿಂಡಿಗಳಿಂದ ದೂರವಿರಬೇಕು. ಮೈದಾ ಹಿಟ್ಟಿನಿಂದ ತಯಾರಿಸಿದ ಸಿಹಿ ಮತ್ತು ಖಾರದ ತಿಂಡಿಗಳನ್ನು ಸೇವಿಸಲೇಬಾರದು.
ಬೇಸಿಗೆಯಲ್ಲಿ ಆರೋಗ್ಯಕರ ಪಾನೀಯಗಳು:
೧)-ದ್ರಾಕ್ಷಿ ಜ್ಯೂಸ್: ಒಣ ದ್ರಾಕ್ಷಿ ಹಾಗೂ ಒಂದು ಕಪ್ನಷ್ಟು ಹಸಿ ದ್ರಾಕ್ಷಿ ಬೆರೆಸಿ ರುಬ್ಬಿ ಜ್ಯೂಸ್ ತಯಾರಿಸಬೇಕು. ಒಣ ದ್ರಾಕ್ಷಿ ಸಿಹಿಯಾಗಿರುವುದರಿಂದ ಜ್ಯೂಸ್ ಗೆ ಸಕ್ಕರೆ ಬೆರೆಸುವ ಅಗತ್ಯವಿಲ್ಲ. ಯಾವುದೇ ಹಣ್ಣಿನ ಪಾನೀಯಕ್ಕೂ ಸಕ್ಕರೆ ಬೆರೆಸಬೇಡಿ. ಬೇಕಿದ್ದರೆ ಜೇನುತುಪ್ಪ ಬೆರೆಸಿ ಕುಡಿಯಿರಿ.
..................................................................ಮುಂದುವರೆಯುವುದು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
1 ಕಾಮೆಂಟ್:
ಬೇಸಿಗೆಗೆ ಉಪಯುಕ್ತವಾದ ಸಲಹೆಗಳು ಕೊಟ್ಟಿರೋದಕ್ಕೆ ಧನ್ಯವಾದಗಳು.
ಕಾಮೆಂಟ್ ಪೋಸ್ಟ್ ಮಾಡಿ