೧. ಮೆಣಸನ್ನು ನೀರಿನಲ್ಲಿ ತೇಯ್ದು ಮೊಡವೆಗಳಿಗೆ ಹಚ್ಚುತ್ತಾ ಬಂದರೆ ಕೆಲವೇ ದಿನಗಳಲ್ಲಿ ಮೊಡವೆಗಳು ಮುಖದಲ್ಲಿ ಇಲ್ಲದಂತಾಗುವುದು.
೨. ಕೊತ್ತಂಬರಿಸೊಪ್ಪಿನ ರಸದೊಂದಿಗೆ ನಿಂಬೆರಸ ಮಿಶ್ರ ಮಾಡಿ, ಕ್ರಮವಾಗಿ ಹಚ್ಚುತ್ತಿದ್ದರೆ ಮೊಡವೆ ಹಾಗೂ ಚರ್ಮದ ಮೇಲಿನ ಕಲೆಗಳು ಕಣ್ಮರೆ ಆಗುವುವು.
೩. ಬಾದಾಮಿ ಬೀಜಗಳನ್ನು ಶುದ್ಧವಾದ ಹಸುವಿನ ಹಾಲಿನಲ್ಲಿ ಅರೆದು, ಹತ್ತಿಯೊಂದಿಗೆ ಆ ಮಿಶ್ರಣವನ್ನು ಅದ್ದಿ ಮೊಡವೆಯ ಮೇಲೆ ಸವರುತ್ತಿದ್ದರೆ ಮೊಡವೆಯ ಗುರುತು ಮಾಯವಾಗುವುದು.
೪. ಸೇಬಿನ ಹಾಗೂ ನಿಂಬೆಯ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ನುಣ್ಣಗೆ ಅರೆದು ಪುಡಿ ಮಾಡಿ ಚೂರ್ಣವನ್ನು ಹಾಲಿನಲ್ಲಿ ಬೆರೆಸಿ ಮೊಡವೆಗಳಿಗೆ ಹಚ್ಚಿದರೆ ಶೀಘ್ಹ್ರದಲ್ಲಿಯೇ ಮೊಡವೆಯ ಗುಳ್ಳೆ ಕರಗುವುದು.
೫. ಸೇಬಿನ ತಿರುಳನ್ನು ಅರೆದು ಮುಖಕ್ಕೆ ಲೇಪಿಸಿಕೊಳ್ಳುವುದರಿಂದ ವಾರದ ಒಳಗಾಗಿ ಮೊಡವೆ ಗುಳ್ಳೆಗಳು ಮಾಯ ಆಗುವುವು. ಜೊತೆಗೆ ಮುಖ ಕಾಂತಿ ಹೆಚ್ಚುವುದು.
೬. ಎಳೆನೀರಿನಲ್ಲಿ ಕೆಲವು ವಾರ ಮುಖ ತೊಳೆಯುತ್ತಿದ್ದರೆ ಮೊಡವೆಗಳು ಮಾಗುತ್ತವೆ. ಮುಖದ ಮೇಲೆ ಕಪ್ಪು ಕಲೆಗಳಿದ್ದರೆ ಮಾಯ ಆಗುವುವು. ಮುಖದ ಮೇಲೆ ಹೊಳಪು ಹೆಚ್ಚುವುದು.
೭. ಕಿತ್ತಲೆ ಸಿಪ್ಪೆಯನ್ನು ಮುಖದಮೇಲೆ ಉಜ್ಜುತ್ತಿದ್ದರೆ ಅದರಿಂದ ಸುವಾಸನೆಯ ದ್ರವ ಹೊರಬಂದು ಮೊಡವೆ ಗುಳ್ಳೆಗಳು ಒಣಗುವುವು.
೮. ನಿಂಬೇರಸದಲ್ಲಿ ದಾಲ್ಚಿನ್ನಿಯನ್ನು ತೇಯ್ದು ಮೊಡವೆಗಳಿಗೆ ಹಚ್ಚಿದರೆ ಬೇಗ ಒಣಗುವುವು.
೯. ಗರಿಕೆ ಹುಲ್ಲಿನ ರಸವನ್ನು ಮುಖದಮೇಲೆ ಲೇಪಿಸುವುದರಿಂದ ಮೊಡವೆಗಳು ಮಾಗುವುವು.
೧೦. ಹಿಂಗನ್ನು ನೀರಿನಲ್ಲಿ ತೇಯ್ದು ಮೊಡವೆಗಳಿಗೆ ಹಚ್ಚುತ್ತಿದ್ದರೂ ಸಹಾ ಮೊಡವೆ ಗುಳ್ಳೆಗಳು ಮುಖದ ಮೇಲೆ ಕಾಣದಂತಾಗುವುದು.
ಇದಕ್ಕಿಂತ ಮುಖ್ಯವಾಗಿ ಈ ಯಾವುದೇ ಚರ್ಮ ರೋಗಗಳು ಬರುವುದು ಹೊಟ್ಟೆಯೊಳಗಿಂದ. ಹೊಟ್ಟೆ ಶುದ್ಧ ಆಗಿದ್ದರೆ ಯಾವುದೇ ತರಹದ ಚರ್ಮ ರೋಗಗಳು ಬರುವುದಿಲ್ಲ. ಇದಕ್ಕಾಗಿ ತಿಂಗಳಿಗೆ ಒಂದು ಸಲ ಭೇದಿ ಮಾತ್ರೆಯನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದ ಪಕ್ಷದಲ್ಲಿ ಹೊಟ್ಟುಳ್ಳ ಧಾನ್ಯಗಳನ್ನು ಸೇವಿಸಬೇಕು. ನಮ್ಮ ದೇಹವೂ ಸಹಾ ನಮ್ಮ ಮನೆಯಲ್ಲಿರುವ ಚರಂಡಿಯಂತೆ. ಮನೆಯಲ್ಲಿರುವ ಚರಂಡಿಗೆ ಏನೇನೊ ಹಾಕಿದರೆ ಹೇಗೆ ಮನೆಯೆಲ್ಲಾ ಹಾಳಾಗುತ್ತದೋ, ಅದೇ ರೀತಿ ನಮ್ಮ ದೇಹದ ಚರಂಡಿ ಕೂಡ. ಎಣ್ಣೆಯಲ್ಲಿ ಕರಿದ ತಿಂಡಿಗಳು, ಮೈದಾ ಹಿಟ್ಟಿನಿಂದ ಮಾಡಿದ ಸಿಹಿ ತಿಂಡಿಗಳು ಮತ್ತು ಕರಿದ ತಿಂಡಿಗಳು, ಮೈದಾ ದೋಸೆ, ಮೈದಾ ಬ್ರೆಡ್ ಇತ್ಯಾದಿಗಳನ್ನು ತಿಂದರೆ ಹೊರಗಿನ ಯಾವ ಔಷಢಿಗಳಿಗೂ ಈ ರೋಗಗಳು ವಾಸಿಯಾಗುವುದಿಲ್ಲ. ವೃಥಾ ಹಣ ಪೋಲು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
8 ಕಾಮೆಂಟ್ಗಳು:
ಸಿರಿಯೆಸ್ಸಾಗಿ ದಪ್ಪ ಆಗಬೇಕು ಸರ್... ಏನ್ ಮಾಡ್ಲಿ...
olle lekhana, upayukthavaagide.....
ಧನ್ಯವಾದ ಸರ್, ನಿಮ್ಮ ಮನೆಯ ಓಷಧಿ ಸಂಜೀವಿನಿಯಂತೆ
olleya blog sir nimmadu.tumbaa upayukta maahiti needutta bandiddeeri:)
@vee ಮನಸಿನ ಮಾತು--ನಾನು ಹೇಳೋದಿದ್ರೆ ದಯವಿಟ್ಟು ದಪ್ಪ ಆಗಲು ಪ್ರಯತ್ನಿಸಬೇಡಿ. ಯಾಕಂದರೆ ಆಮೇಲೆ ಅಂದರೆ ವಯಸ್ಸಾದಮೇಲೆ ದಪ್ಪ ಇಳಿಸಿಕೊಳ್ಳೋಕೆ ತುಂಬಾ, ತುಂಬಾ ಕಷ್ಟಪದಬೇಕಾಗುತ್ತದೆ. ನಿಮಗೆ ದಪ್ಪ ಆಗಲೇ ಬೇಕು ಅನ್ನೋದಾದ್ರೆ ಸಿಹಿ ತಿಂಡಿಗಳನ್ನು ಜಾಸ್ತಿ ಉಪಯೋಗಿಸಿ. ಜೊತೆಗೆ ನಿಮ್ಮ ಜಾತಕದಲ್ಲಿ ನೀವು ಸಣ್ಣ ನೇ ಇರಬೇಕು ಅಂತ ಬರೆದಿದ್ದರೆ ಏನು ತಿಂದರೂ ದಪ್ಪ ಆಗುವುದಿಲ್ಲ.
ಇಲ್ಲಿ ಕಾಮೆಂಟ್ಸ್ ಬರೆದಿರುವವರೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.
Tumba upayuktha mahitigalu sir ....dhanyavadhagalu
Sir ,
yede dappa aagalu yenu madbeku
ಕಾಮೆಂಟ್ ಪೋಸ್ಟ್ ಮಾಡಿ