ನಿಮ್ಮ ದೇಹದ ಒಳಗಡೆ ಏನಿದೆ ನೋಡಿದ್ದೀರಾ? ನಿಮ್ಮ ದೇಹದ ಒಳಗೆ ಎಷ್ಟು ಕೊಳಕು ತುಂಬಿದೆ ಅನ್ನೋದು ಗೊತ್ತಾ?

ನೀವು ಬೆಳಿಗ್ಗೆ ಎದ್ದ ತಕ್ಷಣ ಹಲ್ಲು ಉಜ್ಜಿ, ಉಜ್ಜಿ ಉಜ್ಜುತ್ತೀರಾ. ಚೆನ್ನಾಗಿ ಸೋಪ್ ಹಾಕಿ ಸ್ನಾನ ಮಾಡುತ್ತೀರ, ದೇಹದ ಹೊರಗೆಲ್ಲಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದೀರಾ, ಅಲ್ಲವೇ? ಹಾಗೆಯೇ ನಿಮ್ಮ ದೇಹದ ಒಳಗೂ ಚೆನ್ನಾಗಿರುವಂತೆ ನೋಡಿಕೊಳ್ಳಬೇಕಲ್ಲವೇ? ಇದಕ್ಕಾಗಿ ಏನು ಮಾಡಬೇಕು ಎಂಬುದನ್ನು ಇಲ್ಲಿ ಸೂಕ್ಷ್ಮವಾಗಿ ಬರೆಯುತ್ತೇನೆ ಹಾಗು ನಿಮ್ಮ ದೊಡ್ಡ ಕರುಳಿನ ಒಳಗೆ ಎಷ್ಟೆಲ್ಲಾ ಪಾಚಿ ಕಟ್ಟಿಕೊಂಡಿದೆ ಎಂಬ ಚಿತ್ರಗಳನ್ನೂ ಇಲ್ಲಿ ಅಂಟಿಸುತ್ತೇನೆ.
ನೀವು ನಿಮ್ಮ ದೇಹವನ್ನು ಯಾವುದೇ ರೋಗ ಬರದಂತೆ ನೋಡಿಕೊಳ್ಳಬೇಕಾದರೆ ಅಥವಾ ರೋಗ ಬಂದಮೇಲೆ ಸರಿಪಡಿಸಿಕೊಳ್ಳಬೇಕಾದರೆ ಈ ಕೆಳಕಂಡ ಬ್ರಾನ್ ಗಳನ್ನು ನಿಮ್ಮ ನಿತ್ಯ ಊಟಗಳಲ್ಲಿ ಉಪಯೋಗಿಸುತ್ತಲೇ ಇದ್ದರೆ ಎಲ್ಲ ತರಹ ರೋಗಗಳು ಮಂಗಮಾಯವಾಗುತ್ತವೆ.
ಓಟ್ ಬ್ರಾನ್, ಗೋಧಿ ಬ್ರಾನ್, ರೈಸ್ ಬ್ರಾನ್, ಓಟ್ ಮೀಲ್ಸ್, ಬಾರ್ಲಿ ಬ್ರಾನ್, ಇತ್ಯಾದಿ ಉಪಯೋಗಿಸುತ್ತಲೇ ಇರಬೇಕು. ಪಾಲೀಶ್ ಮಾಡಿದ ಅಕ್ಕಿಯ ಅನ್ನವನ್ನು ತಿನ್ನುವವರು, ಜಂಕ್ ತಿಂಡಿಗಳನ್ನು ತಿನ್ನುವವರು, ಮೈದಾದಲ್ಲಿ ಮಾಡಿರುವ ತಿಂಡಿಗಳನ್ನು ತಿನ್ನುವವರು, ಕುರುಕು ತಿಂಡಿಗಳನ್ನು ತಿನ್ನುವವರು ಈ ಮೇಲೆ ಹೇಳಿದ ಬ್ರಾನ್ ಗಳನ್ನು ದಿನ ನಿತ್ಯ ಉಪಯೋಗಿಸುತ್ತಿದ್ದರೆ ಅನುಕೂಲವಾಗುತ್ತದೆ. ಆದರೆ ಪ್ರತಿದಿನವೂ ಈ ಮೇಲಿನ ತಿಂಡಿಗಳನ್ನು ತಿಂದು ಬ್ರಾನ್ ಉಪಯೋಗಿಸುತ್ತಿದ್ದರೂ ಸಹಾ ಏನೂ ಪ್ರಯೋಜನ ಆಗುವುದಿಲ್ಲ. ಇದಲ್ಲದೆ ವಾತಾವರಣದಿಂದ, ಹೊರಗಿನ ಕೆಮಿಕಲ್ ಹೊಗೆಗಳಿಂದಲೂ ಈ ಕೆಟ್ಟ ಪಾಚಿಗಳೂ ನಮ್ಮ ಕರುಳಿನಲ್ಲಿ ಶೇಖರವಾಗಿ ತುಂಬಾ ತೊಂದರೆ ಅನುಭವಿಸಬೇಕಾಗಿ ಬರುತ್ತದೆ.

7 ಕಾಮೆಂಟ್ಗಳು:
ಈ ಬ್ರಾನ್ ಅಂದರೆ ಹೊಟ್ಟು ಅಲ್ಲವೇ ? ಇದು ಎಲ್ಲಿ ಸಿಗುತ್ತದೆ ? ಅದನ್ನು ತಿನ್ನುವದು ಹೇಗೆ?
deffinetly sir i agreee with you, iam also nutritionist
good info...
@kalsakri--ಬ್ರಾನ್ ಅಂದರೆ ಹೊಟ್ಟು ಹೌದು. ಇದು ಪಾಲೀಶ ಮಾಡದೇ ಇರುವ ಕೆಂಪು ಅಕ್ಕಿಯಲ್ಲಿ ಹೇರಳವಾಗಿ ಇರುತ್ತದೆ. ಈ ಬ್ರಾನ್ ಗಳು ಎಲ್ಲಾ ದೊಡ್ಡ, ದೊಡ್ಡ ಮಾಲ್ ಗಳಲ್ಲಿ, ಮೋರ್ ಎನ್ನುವ ಅಂಗಡಿಗಳಲ್ಲಿ, ರೆಲಿಯನ್ಸ್ ಅಂಗಡಿಗಳಲ್ಲಿ, ಫುಡ್ ವರ್ಲ್ಡ್ ನಲ್ಲಿ ಸಿಕ್ಕುತ್ತದೆ. wheat bran, oat bran, barley bran, ceraeal bran etc. ಇದನ್ನು ರಾತ್ರಿ ಊಟ ಆಗಿ ೨ ಗಂಟೆಗಳ ನಂತರ ಮಲಗೋಕೆ ಮುಂಚೆ ಒಂದು ಸುಮಾರಾದ ಗ್ಲಾಸ್ ಗೆ ಎರಡು ಟೀ ಚಮಚ ಬ್ರಾನ್ ಅನ್ನು ಹಾಕಿ ಮೇಲೆ ನೀರು ತುಂಬಿ ಚೆನ್ನಾಗಿ ಕಲಕಿ ಕುಡಿಯಬೇಕು. ಇದಕ್ಕೆ ಸಕ್ಕರೆ, ಬೆಲ್ಲ, ಉಪ್ಪು ಇತ್ಯಾದಿ ಏನನ್ನೂ ಬೆರಸ್ಬಾರದು. ಹಾಗಯೇ ಕುಡಿಯಬೇಕು. ನಂತರ ಒಂದು ದೊಡ್ಡ ಲೋಟ ದಲ್ಲಿ ನೀರನ್ನು ಕುಡಿಯಬೇಕು. ಒಂದೈದು ನಿಮಿಷ ಬಿಟ್ಟು ಮಲಗಬೇಕು. ಅಥವಾ ನೀವು ತಿನ್ನುತ್ತಿರುವ ತಿಂಡಿ, ಊಟದ ಮೇಲೆ ಒಂದೆರಡು ಚಮಚ ಬ್ರಾನ್ ಅನ್ನು ಹಾಕಿ ಚೆನ್ನಾಗಿ ಕಲಸಿ ತಿನ್ನಬೇಕು. ಪಾಲೀಶ್ ಮಾಡಿಲ್ಲದೇ ಇರುವ ಕೆಂಪು ಅಕ್ಕಿಯನ್ನು ನಿಮ್ಮ ಊಟಕ್ಕೆ ಉಪಯೋಗಿಸಿರಿ.
olle tips
dhanyavaadagalu
Thanks.good tips
ಕಾಮೆಂಟ್ ಪೋಸ್ಟ್ ಮಾಡಿ