ಅಪಾಯಕಾರಿ ಪಾಲೀಷ್ ಮಾಡಿದ ಅಕ್ಕಿ
ಪಾಲೀಷ್ ಮಾಡಿದ ಅಕ್ಕಿಯನ್ನು ಊಟಮಾಡಬೇಡಿ. ಅದರಲ್ಲಿ ಪ್ರತಿದಿನವೂ ನರಳುವ ರೋಗಗಳು ಬರುತ್ತವೆ. ರೋಗಗಳು ಒಂದಕ್ಕೊಂದು ಬರುತ್ತಲೇ ಇರುತ್ತವೆ. ಯಾವುದೇ ರೋಗಗಳು ವಾಸಿಯಾಗದೇ ಬರೀ ಔಷಧಿಗಳನ್ನು ತೆಗೆದುಕೊಳ್ಳುವುದೇ ಒಂದು ಕೆಲಸವಾಗಿ, ಮುಂಚೆಗೆ ಒಂದು ಮಾತ್ರೆ ಇದ್ದದ್ದು ಕೆಲವು ತಿಂಗಳುಗಳ ಅಥವಾ ಕೆಲವು ವರ್ಷಗಳ ನಂತರ ಬೊಗಸೆಯಷ್ಟು ಮಾತ್ರೆಗಳನ್ನು ನುಂಗಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಆದರೂ ರೋಗಗಳು ತಹಬಂದಿಗೆ ಬರುವುದಿಲ್ಲ. ಕಂಡ ಕಂಡ ಡಾಕ್ಟರ್ ಗಳ ಹತ್ತಿರ ಅಲೆದಾಟ ಶುರುವಾಗುತ್ತದೆ. ಇದಕ್ಕೆಲ್ಲಾ ಕೊನೆ ಹಾಡಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.
ಇದಕ್ಕೆಲ್ಲ ಒಳ್ಳೆಯ ಉಪಾಯವೆಂದರೆ ಹೈ ಫೈಬರ್(ಹೊಟ್ಟುಯುಕ್ತ) ಆಹಾರವನ್ನು ಊಟಮಾಡುವುದೇ ಪರಿಹಾರ. ಇದರಲ್ಲಿ ೧೦೦ ಕ್ಕೆ ೧೦೦ ರಷ್ಟು ಪರಿಹಾರ ಸಿಗುತ್ತದೆ. ಔಷಧಿಗಳಿಗೆ ೫೦ಪೈಸೆ ಗಳನ್ನು ಸಹ ಖರ್ಚು ಮಾಡುವ ಪ್ರಸಂಗವು ಎದುರಾಗುವುದಿಲ್ಲ. ಕೆಂಪು ಅಕ್ಕಿ (ಅತಿ ಹೆಚ್ಚು ಫೈಬರ್ ಯುಕ್ತ) ಮತ್ತು ರಾಗಿ ಹೇರಳವಾಗಿ ಉಪಯೋಗಿಸಿ. ರಾಗಿ ಆಗದಿದ್ದವರು ಕೆಂಪು ಅಕ್ಕಿಯನ್ನು ಉಪಯೋಗಿಸಿ ಶೇ.೧೦೦ ರಷ್ಟು ಪ್ರಯೋಜನ ಪಡೆಯಿರಿ. ರೈತರನ್ನು ಕೆಂಪು ಅಕ್ಕಿಯನ್ನು ಬೆಳೆಯಲು ಪ್ರೋತ್ಸಾಹಿಸಿ. ರೈತರಿಗೆ ತಿಳುವಳಿಕೆ ಕೊಡಿ. ಅತ್ಯಾಶ್ಚರ್ಯಕರ ವ್ಯತ್ಯಾಸವನ್ನು ಗಮನಿಸಿರಿ. ನೀವು ಯಾವಾಗಲೂ ಏನೇ ತಿಂದರೂ ಅದು ಹೈ ಫೈಬರ್ ಯುಕ್ತವಾಗಿರಲಿ. ಭತ್ತ ಮಾತ್ರ ತೆಗೆದ ಕೆಂಪು ಅಕ್ಕಿಯಲ್ಲಿ ಹೇರಳವಾಗಿ ಫೈಬರ್ ಇರುತ್ತದೆ.
ಇದು ದೇಹಕ್ಕೆ ತುಂಬಾ ತಂಪನ್ನು ಒದಗಿಸುತ್ತದೆ ಮತ್ತು ಯಾವುದೇ ರೋಗಗಳು ಹತ್ತಿರ ಸುಳಿಯುವುದಿಲ್ಲ. ಇಡೀ ದಿನ ಆನಂದಮಯವಾಗಿರುತ್ತದೆ ಮತ್ತು ಚಟುವಟಿಕೆಯಿಂದ ಕೂಡಿರುತ್ತದೆ. ನೀವು ಕಷ್ಟಪಟ್ಟು ದುಡಿದ ಹಣವನ್ನು ಡಾಕ್ಟರ್ ಗಳಿಗೆ ಸುರಿಯಬೇಡಿ. ತಿಂದುನೋಡಿ ಆನಂದಿಸಿ "ಕೆಂಪು ಅಕ್ಕಿಯ ಚಮತ್ಕಾರವನ್ನು". ಮಾರ್ಕೆಟ್ನಲ್ಲಿ ಪಾಲೀಷ್ ಮಾಡಿದ ಅಕ್ಕಿಗೆ ಬಣ್ಣವನ್ನು ಹಾಕುತ್ತಿದ್ದಾರೆ. "ಎಚ್ಚರಿಕೆ". ಅಲ್ಲಿಯೇ ಉಜ್ಜಿನೋಡಿದರೆ ಕೈಗೆ ಬಣ್ಣ ಮೆತ್ತಿಕ್ಕೊಳ್ಳುವುದು. ನಿಜವಾದ ಕೆಂಪು ಅಕ್ಕಿ ಅನ್ನ ಮಾಡುವ ಮೊದಲು ತೊಳೆದರೆ ಮೇಲಿನ ಕೆಂಪು ಬಣ್ಣವು ಹೋಗಬಾರದು. ಅದೇ ನಿಜವಾದ ಕೆಂಪು ಅಕ್ಕಿ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ