ಪಾಲೀಶ್ ಮಾಡಿದ ಅಕ್ಕಿ "ಆಸಿಡ್" ಮಯ.
ಪ್ರಕೃತಿ ನಮಗೆಲ್ಲ ಜನ್ಮ ಕೊಟ್ಟಿರುವುದು ನಮಗೆಲ್ಲಾ ತಿಳಿದೇ ಇದೆ. ಪ್ರಕೃತಿ ನಮಗೆ ಏನೇನು ಆಹಾರಗಳನ್ನು ಕೊಟ್ಟಿದೆಯೋ ಅದನ್ನೆಲ್ಲಾ ಸಂಸ್ಕರಿಸದೆ ಅದು ಕೊಟ್ಟಿರುವ ರೂಪದಲ್ಲೇ ಅಂದರೆ ಉದಾಹರಣೆಗೆ: ಅಕ್ಕಿಯನ್ನು ಅದರ ಮೇಲಿನ ಭತ್ತವನ್ನು ಮಾತ್ರ ತೆಗೆದು ಬರುವ
ಪೂರ್ಣಧಾನ್ಯವನ್ನು ಊಟ ಮಾಡಿದರೆ ಸಂಪೂರ್ಣ ಆರ್‍ಓಗ್ಯವು ಲಭಿಸುವುದು. ನಾವು ಊಟ ಮಾಡುವುದು ಏತಕ್ಕಾಗಿ? ನಾವು ಊಟ ಮಾಡುವುದು ಶಕ್ತಿ ಬರುವುದಕ್ಕೋ ಅಥವ ಖಾಯಿಲೆ ಬರಿಸಿಕೊಳ್ಳಲಿಕ್ಕೋ? ಆಸಿಡ್ ಇರುವ ಪಾಲೀಶ್ ಮಾಡಿದ ಅಕ್ಕಿಯನ್ನು ಊಟ ಮಾಡುವುದರಿಂದ ಏನು ಪ್ರಯೋಜನ? ಪಾಲೀಶ್ ಮಾಡಿದ ಅಕ್ಕಿಯನ್ನು ಊಟ ಮಾಡುವುದರಿಂದ "ಆಸಿಡಿಟಿ" ಎಂಬ ರೋಗವು ಬರುವುದು. ಈ ಆಸಿಡಿಟಿ ಎಂಬ ರೋಗದಿಂದ ಬಳಲುವವರು ಯಾವಾಗಲೂ ಸಿಟ್ಟು, ಸೆಡವು, ಕೋಪ, ಮಾನಸಿಕ ಖಿನ್ನತೆ, ಆಸಿಡಿಕ್ ಬ್ಲಡ್,
ಅರ್ಧ, ಅರ್ಧ ಗಂಟೆಗೆ ಒಂದು ಸಲ ಏನಾದರೂ ತಿನ್ನುತ್ತಲೇ ಇರುತ್ತಾರೆ. ಆಸಿಡಿಟಿ ಇಂದ ಬಳಲುವವರು ನೂರಾರು "ಡೈಝೀನ್" ಮತ್ತು "ಜೆಲ್ಯೂಸಿಲ್" ಎಂಬ ಮಾತ್ರೆಗಳನ್ನು ನುಂಗುತ್ತಿರುತ್ತಾರೆ. ಇದಲ್ಲದೆ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಮತ್ತು ಸಿಹಿ ತಿಂಡಿಗಳನ್ನು ವಿಪರೀತವಾಗಿ ತಿನ್ನುತ್ತಾರೆ. ಈ ಮೇಲೆ ಹೇಳಿರುವ ಪಧಾರ್ಥಗಳಿಂದ ದೇಹವು ರಾಸಾಯಿನಿಕ ಗುಡಾಣ ಆಗುತ್ತದೆ. ಆಹಾರದಿಂದಲೇ ಎಲ್ಲ ತರಹ ದೇಹದ ತೊಂದರೆಗಳನ್ನು ೧೦೦ ಕ್ಕೆ ೧೦೦ ರಷ್ಟು ವಾಸಿಮಾಡಿಕ್ಕೊಳ್ಳಬಹುದು. ಈಗಿರುವ ಆಧುನಿಕ ಖಾಯಿಲೆಗಳು ಆಸಿಡಿಟಿ ಎಂಬುದರಿಂದಲೇ ಉತ್ಪನ್ನವಾಗುತ್ತಿವೆ. ಇದರಿಂದ ದೇಹದಲ್ಲಿ ಕೊಲೆಸ್ಟರಾಲ್, ಬೀ. ಪಿ, ಸಕ್ಕರೆ ಖಾಯಿಲೆ, ಹಾರ್ಟ್ ಟ್ರಬಲ್, ಕ್ಯಾನ್ಸರ್, ಇತ್ಯಾದಿ ರೋಗಗಳು ಕಾಣಿಸಿಕೊಳ್ಳುತ್ತವೆ. ನಂತರ ಔಷಧಿಗಳ ಸೇವನೆ. ನಂತರ ಆಸ್ಪತ್ರೆಗೋ, ನರ್ಸಿಂಗ್ ಹೋಂಗೋ ದಾಖಲಾತಿ ಆಗಬೇಕಾಗುತ್ತದೆ. ಅಲ್ಲಿ ವಿಷಯುಕ್ತ ಔಷಧಗಳ ಸೇವನೆ ಪ್ರಾರಂಭ. ಆಹಾರಕ್ಕಿಂತ ಔಷಧಗಳೇ ಜಾಸ್ತಿಯಾಗುತ್ತದೆ.
ಪ್ರಕೃತಿ ಕೊಟ್ಟಿರುವ ಕೆಂಪು ಅಕ್ಕಿಯನ್ನು ಪಾಲೀಶ್ ಮಾಡದೇ ಸೇವಿಸಿದರೆ ಶೇ. ೧೦೦ ಕ್ಕೆ ೧೦೦ ರಷ್ಟು ಆರೋಗ್ಯವು ಲಭಿಸುವುದು. ಇಂದೇ ಕೆಂಪು ಅಕ್ಕಿಯ ಸೇವನೆಯನ್ನು ಆರಂಭಿಸಿರಿ. ಜೀವನವನ್ನು ಆನಂದದಿಂದ ಕಳೆಯಿರಿ. ಇದನ್ನು ಉಪಯೋಗಿಸುವುದರಿಂದ ನಿಮಗೆ ಬೇರೆ ತಿಂಡಿಗಳನ್ನು ತಿನ್ನಲು ಮನಸ್ಸೇ ಬರುವುದಿಲ್ಲ. ಇದಲ್ಲದೇ ಹೊಟ್ಟೆಯು ಯಾವಾಗಲೂ ತಂಪಾಗಿರುತ್ತದೆ, ಹೊಟ್ಟೆಯು ಹಗುರವಾಗಿರುತ್ತದೆ, ಹೊಟ್ಟೆ ಭಾರವಾಗುವುದಿಲ್ಲ, ಆತಂಕ, ಭಯ, ಮಾನಸಿಕ ಖಿನ್ನತೆ, ಹೊಟ್ಟೆಯಲ್ಲಿನ ಸಂಕಟ ಇಲ್ಲವಾಗುತ್ತದೆ, ಮನಸ್ಸು ಆಹ್ಲಾದವಾಗಿರುತ್ತದೆ, ಮಲವಿಸರ್ಜನೆ ತುಂಬಾ ಚೆನ್ನಾಗಿ ಆಗಿ ಕರುಳಿನ ಒಳಗಡೆ ಕಟ್ಟಿಕೊಂಡಿರುವ ಅತ್ಯಂತ ಕಟ್ಟಕಡೆಯ ಪಾಚಿಯೂ ಸಹ ಕೊಚ್ಕೊಂಡು ಹೋಗುತ್ತದೆ. ಕೆಂಪು ಅಕ್ಕಿಗೆ - ಕೆಂಪು ಮುಂಡಗ ಅಥವಾ ಕಜ್ಜಾಯ ಅಕ್ಕಿ ಎಂದೂ ಕರೆಯುತ್ತಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ