ಭಾನುವಾರ, ಆಗಸ್ಟ್ 12, 2007

ಕೆಂಪು ಅಕ್ಕಿ(ಕಜ್ಜಾಯ ಅಕ್ಕಿ)

ಕೆಂಪು ಅಕ್ಕಿ(ಕಜ್ಜಾಯ ಅಕ್ಕಿ)

ಯಾವುದೇ ಔಷಧಿಗಳಿಂದ ವಾಸಿಯಾಗದ ಖಾಯಿಲೆಗಳು, ಹೊಟ್ಟಿನಿಂದ ಕೂಡಿದ ಕೆಂಪು ಅಕ್ಕಿಯಿಂದ ವಾಸಿಯಾಗುತ್ತದೆ, (ಅಂದರೆ ಭತ್ತ ಮಾತ್ರ ತೆಗೆದ ಕೆಂಪು ಅಕ್ಕಿ) ಅಲ್ಲದೆ ಅಧಿಕ ಪೌಷ್ಟಿಕಾಂಶಗಳೂ ದೊರೆತು ದೇಹ ಶಕ್ತಿಯುತವಾಗುತ್ತದೆ. ಕೆಂಪು ಅಕ್ಕಿಯ ವಿಶೇಷ ಏನೆಂದರೆ ನೀವು ಎಷ್ಟು ತಿನ್ನುತ್ತಿದ್ದರೂ ಹೊಟ್ಟೆ ತುಂಬುವುದೇ ಇಲ್ಲ. ತಿನ್ನಲು ತುಂಬಾ ತುಂಬಾ ರುಚಿಯಾಗಿರುತ್ತದೆ. ನಾವು ಊಟ ಮಾಡಿಯೇ ಇಲ್ಲವೇನೋ ಅನ್ನಿಸುತ್ತಿರುತ್ತದೆ. ಎಷ್ಟು ತಿಂದರೂ ಒಳಗಡೆ ಹೋಗುತ್ತಲೇ ಇರುತ್ತದೆ. ಹೊಟ್ಟೆ ಭಾರವೇ ಆಗುವುದಿಲ್ಲ. ಒಂದು ಸಲ ಊಟ ಮಾಡಿದರೆ ಸುಮಾರು ೬ ರಿಂದ ೮ ಗಂಟೆಗಳ ಕಾಲ ಆರಾಮವಾಗಿ ಇರಬಹುದು. ಏನೇನೂ ಸಂಕಟ ಆಗುವುದಿಲ್ಲ. ಹೊಟ್ಟೆ ತಂಪಾಗಿರುತ್ತದೆ. ಸುಸ್ತು ಕೂಡ ಆಗುವುದಿಲ್ಲ. ಇಡೀ ದಿನ ದೇಹ ಮತ್ತು ಮನಸ್ಸು ಆನಂದಮಯವಾಗಿರುವುದು. ಇದೇ ತಾನೆ ಎಲ್ಲ ಮನುಷ್ಯರಿಗೂ ಬೇಕಾಗಿರುವುದು. ದೇಹದಲ್ಲಿರುವ ಕೊಲೆಸ್ಟರಾಲ್ ಇರಲಿ, ಯಾವುದೇ ರೀತಿಯ ಕೊಬ್ಬು ಇರಲಿ, ಬೊಜ್ಜು, ವಾತ, ಪಿತ್ತ ಹಾಗೂ ಕಫದಿಂದ ಉಂಟಾದ ರೋಗಗಳನ್ನೂ, ಮೈ, ಕೈ ನೋವುಗಳು, ಬೆನ್ನು ನೋವು, ಸೊಂಟನೋವು, ತಲೆನೋವು, ತಲೆಭಾರ, ಮಾರ್ನಿಂಗ್ ಸಿಕ್ ನೆಸ್, ಹೊಟ್ಟೆ ಉರಿ ಇತ್ಯಾದಿ ಮತ್ತು ದೇಹದಲ್ಲಿರುವ ಎಲ್ಲಾ ರೀತಿಯ ವಿಷ ಪದಾರ್ಥಗಳನ್ನು ಹೊಡೆದೋಡಿಸುವ ಶಕ್ತಿ ಸಮೃದ್ದಿಯಾದ ಹೊಟ್ಟಿನಿಂದ ಕೂಡಿದ ಕೆಂಪು ಅಕ್ಕಿಗೆ ಮಾತ್ರ ಇದೆ. ಕೆಂಪು ಅಕ್ಕಿಯ ಅನ್ನವನ್ನು ತಿನ್ನುವುದರಿಂದ ಕ್ಯಾನ್ಸರ್ ಸಹಾ ವಾಸಿಯಾಗುವುದೆಂದು
ವಿಜ್ನಾನಿಗಳು ಇತ್ತೀಚೆಗೆ ಕಂಡುಹಿಡಿದಿದ್ದಾರೆ. ಚರ್ಮ ರೋಗಗಳೂ ಸಹ ವಾಸಿಯಾಗುವುದು. ನೀವೆಲ್ಲಾ ಕಬ್ಬಿನ ರಸವನ್ನು ಹೇಗೆ ತೆಗೆಯುತ್ತಾರೆಂಬುದನ್ನು ನೋಡಿದ್ದೀರಿ. ಅದೇ ರೀತಿ ಹೊಟ್ಟಿನಿಂದ ಕೂಡಿದ ಕೆಂಪು ಅಕ್ಕಿಯು ನಿಮ್ಮ ದೇಹದಲ್ಲಿರುವ ಎಲ್ಲ ತರಹದ ವಿಷ,ಕಫ,ಕೊಬ್ಬು,ಕೊಲೆಸ್ಟರಾಲ್ ಮತ್ತು ದೊಡ್ಡಕರುಳಿನಲ್ಲಿ ಕಟ್ಟಿಕೊಂಡಿರುವ ಎಲ್ಲ ಮಲಗಳು ಒಂದೇ ಹೊತ್ತಿನ ಊಟದಲ್ಲಿ ಹೋಗಿಬಿಡುತ್ತದೆ. ಅಥವ ಒಂದು ವಾರದ ಊಟದಲ್ಲಿ ಹೋಗಿಬಿಡುತ್ತದೆ. ಸ್ವರ್ಗ ಸಿಕ್ಕಿದಷ್ಟು ಸಂತೋಷವುಂಟುಮಾಡುತ್ತದೆ. ಇಂದೇ ಕೆಂಪು ಅಕ್ಕಿಯ ಅನ್ನವನ್ನು ಸೇವಿಸಲು ಆರಂಭಿಸಿರಿ ಮತ್ತು ರೋಗಗಳಿಂದ ಮುಕ್ತರಾಗಿರಿ. ಎಂದೆಂದಿಗೂ ಆನಂದಮಯವಾದ ಜೀವನವನ್ನು ನಡೆಸಿರಿ. ನಿರೋಗಿಗಳಾಗಿ ಬಾಳಿರಿ. ಬೇಕಾದ ಸಾಧನೆಗಳನ್ನು ಸಂತೋಷದಿಂದ ಮಾಡಿರಿ.
ಹೆಚ್.ಕೆ.ಸತ್ಯಪ್ರಕಾಶ್.
೯೮೮೬೩ ೩೪೬೬೭
೦೮೦-೨೬೭೫೫೨೯೯

ಕಾಮೆಂಟ್‌ಗಳಿಲ್ಲ: